ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ
ಸನಿಹ ರೋಮಾಂಚನ
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ
ತಂಗಾಳಿ ತಬ್ಬಲು ನಾನು
ತೆರೆದೇ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ
ಕಂಡೆ ನಿನ್ನನು
ತಿಂಗಳ ಬೆಳಕಿನಂತೆ
ಹೊಳೆವ ಕಂಗಳು...
ಮುಗಿಲಿನಾಚೆ ನಿಂತೆ
ನಿನ್ನೇ ನೋಡಲು
ನೀನು ನನ್ನಾ ಒಪ್ಪಲು
ಮೆಲ್ಲ ಮೆಲ್ಲ ತಬ್ಬಲು
ಎಂತ ಸಿಹಿ ಕಲ್ಪನೆ
ನಿನ್ನದೆ ಯೋಚನೆ
ನಿನ್ನಿಂದಲೆ ಹೀಗಾದೆ ನಾ
ಸನಿಹ ರೊಮಾಂಚನಾ
ನನ್ನವಳೆ ನನ್ನವಳೆ
ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೆ...
ತಿರುಗಿ ನೋಡೇ ನಿನ್ ಒಮ್ಮೆ
ನನ್ನ ಸನ್ನೆಯ
ನಿನಗಾಗಿ ಕಟ್ಟುವೆ ನಾನು
ಹೊಸ ನಾಳೆಯ
ಗುನುಗುತಿರುವೆ ನಾನು
ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ
ಒಂದು ಗೂಡಿಸು
ನನ್ನ ಹೊಸ ದಾರಿಯು
ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ
ನಾನೇ ಬರುತಿರುವೇನೆ
ಇಲ್ಲಿಂದಲೇ ಆಮಂತ್ರಣ
ಸನಿಹ ರೋಮಾಂಚನ
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ

0 Comments