ಹೇಳದೇ ಕೇಳದೇ, ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ
ಬೆಳವಣಿಗೆ, ಹೊಸ ಬರವಣಿಗೆ
ಹಣೆಯಲಿ ಈಗ ಮೂಡಿದೆ
ಹೇಳದೇ ಕೇಳದೇ, ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ
ನಿನ್ನ ತೋಳೇ ತಂಗುದಾಣ
ಅಲ್ಲೆ ಜೀವಿಸಲೆ ಶಾಶ್ವತ
ನಿನ್ನ ಮೇಲೆ ಪಂಚಪ್ರಾಣ
ನನ್ನ ಜಗ ನಿನಗೆ ಸೀಮಿತ
ಕೇಳದೆ ಅನಿಸಿಕೆ ಸೇರಿದೆ ಹೃದಯಕೆ
ನಿನ್ನ ಒಲವೇ ನೆಪವೀಗ ಬದುಕೋಕೆ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ
ಎಲ್ಲ ಜನುಮ ತರಲು ಪ್ರೇಮ
ಆಗಿ ಬಾ ನೀನೆ ನೇಮಕ
ನಿಂದೆ ಅಮಲು ಅದಲು ಬದಲು
ನನ್ನ ದಿನಚರಿಯ ಕಾಯಕ
ಮಾಗಿದೆ ಪರಿಚಯ ಭಾವದ ವಿನಿಮಯ
ನಿನ್ನ ಹೆಸರೇ ನನ್ನುಸಿರ ಅಡಿಪಾಯ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ

0 Comments