ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಒಂದು ನಿಶ್ಯಬ್ದ ರಾತ್ರೀಲಿ ನಾವು
ಆಡಿದ ಮಾತು ಹಸಿಯಾಗಿದೆ
ನಾವು ನಡೆದಂತ ಹಾದಿಲಿ ಇನ್ನೂ
ಹೆಜ್ಜೆ ಗುರುತೆಲ್ಲ ಹಾಗೆ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯ…
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಜೋರು ಮಳೆಯೆಲ್ಲ ನನಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೊಡೀದಿನ
ದೂರಾಗಿ ನಿನ್ನಿಂದ ನಾ…
ಕರಗಿದೆ ನಾಲಿಗೆ ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

0 Comments