ನುಡಿಸಲೆ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯ ಮೀರಿ ಬಿಡಲೆ
ತುಸು ಇತಿ ಮಿತಿ ಜೊತೆ
ಇದೆ ತರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ನುಡಿಸಲೆ ಹೊಸ ಮಾತಿನ ಪದನಿಸ
ವಿರಸ ಸರಸ ಎರಡು ಇದೆ ನನ್ನಲಿ
ನಗೆಯ ನಡುವೆ ಹನಿಯೊಂದಿದೆ ಕಣ್ಣಲಿ
ಅಳು ಬರಿಸುವ ಸಂಜೆಯಲಿ ರಮಿಸು ನಿನ್ನ ತೋಳಿನಲಿ
ಒಂದು ಮುತ್ತು ನೀಡಿದೆನೆ ತೋರು ಪ್ರೀತಿ ಬೇರೆ ರೀತಿ
ನುಡಿಸಲೆ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ವಿರಹ ಎನುವ ಪದವೆ ನನಗಿನ್ನಿಲ್ಲ
ಸನಿಹ ಇರು ಕೆಲಸ ನನಗಿನ್ನೆಲ್ಲ
ಇದುವರೆಗಿನ ಏಕಾಂತ ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೆನನ್ನ ಪ್ರೀತಿ ತುಂಬ ಜಾಸ್ತಿ
ನುಡಿಸಲೆ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯ ಮೀರಿ ಬಿಡಲೆ
ತುಸು ಇತಿ ಮಿತಿ ಜೊತೆ
ಇದೆ ತರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ನುಡಿಸಲೆ ಹೊಸ ಮಾತಿನ ಪದನಿಸ

0 Comments