ಒಲವಾ ಮೊದಲ ಜಳಕಾ
ಅದ ನೆನೆದರೆ ಪುಳಕಾ
ದಿನವಿಡಿ ಕಾದು ಕುಳಿತೆ
ಎದುರಿಗೆ ಬಂದಳಾಕೆ
ಪರಿಚಯ ಆದ ಮೇಲೆ
ಹೆಸರಾ ಹಿಡಿದು ಕರೆದೆ
ರಾಧೆ... ರಾಧೆ... ರಾಧೆ... ರಾಧೆ....
ಅವಳೊದ ಜಾಗವೆಲ್ಲ ಚಿಗುರಿ ಮೆಲ್ಲ ಮೆಲ್ಲ
ಕೊಗಿಲೆ ಗಾನವೆಲ್ಲ ಚಿಮ್ಮುತಿದೆ ಮೆಲ್ಲ
ಅವಳೊದ ಜಾಗವೆಲ್ಲ ಚಿಗುರಿ ಮೆಲ್ಲ ಮೆಲ್ಲ
ಕೊಗಿಲೆ ಗಾನವೆಲ್ಲ ಚಿಮ್ಮುತಿದೆ....
ರಾಧೆ... ರಾಧೆ... ರಾಧೆ... ರಾಧೆ....
ರಾಧೆ... ರಾಧೆ... ರಾಧೆ... ರಾಧೆ
ಪರಿಚಯವಾದ ಆ ದಿನಗಳು
ಕಳೆದುಹೋದ ಸಿಹಿ ಕ್ಷಣಗಳು
ಕೂಡಿ ಕಂಡ ಸಿಹಿ ಕನಸಲು
ಏನೊ ಜಾದು ಕಂಡೆ
ಅಪರೂಪವಾದ ಈ ವಿಲೆವಾರಿ
ಪ್ರೀತಿಯಾ ಉಸಾಬರಿ
ಒಲವಿಗೊಂದು ಹೊಸ ಖಾತರಿ
ಹೇಗೊ ನೀನು ತಂದೆ
ಮೊದಲ ಕವಿತೆ ಬರೆದಾ ದಿನ
ನನ್ನೋಳ ಮೆಚ್ಚಿನ ಕವಿಯಾದೆ ನಾ
ಮರಳಿ ಪಡೆದ ಆ ಚುಂಬನಾ...
ರೋಮಾಂಚಿತ ಆದೆನಾ
ರಾಧೆ... ರಾಧೆ... ರಾಧೆ... ರಾಧೆ....
ಪರಿಪಟವಾಯ್ತು ನನ್ನ ಬದುಕಲಿ
ದಿನವು ಕನಸುಗಳ ಹಾವಳಿ
ಒಂದೊಂದು ಕನಸಿನ ದಾಳಿಗೆ
ಹೆಗೊ ಸೋತು ಹೋದೆ
ವಿಪರೀತವಾದ ನಿನ್ನ ಒಲವಲಿ
ಕರಗಿ ಹೋದೆ ಜಡಿ ಮಳೆಯಲಿ
ನಡೆವ ಬಾರೆ ಖುಷಿ ಖುಷಿಯಲಿ
ಕೈಯ ಹಿಡಿದುಕೊಂಡು
ಒಂದೊಂದು ಹೆಜ್ಜೆಯು ಬಲು ಮೋಹಕ
ನನ್ನೋಳ ಮಾತೆ ಸಿಹಿ ಚುಂಬಕ
ತುಂತುರು ಹನಿಗಳ ಸಿಂಚನ
ಸಮ್ಮೋಹಿತ ಆದೆ ನಾ
ರಾಧೆ... ರಾಧೆ... ರಾಧೆ... ರಾಧೆ..

0 Comments