ಮಾತಾಡು ನೀ
ಹೃದಯದ ಮೌನ ಹೃದಯಕೆ ಸೀದ
ತಲುಪುವ ಹಾಗೆ ಮಾತಾಡು ನೀ
ಎನಾದರೂ ಮಾತಾಡು ನೀ
ದೂರವೆ ನಿಂತು
ಪ್ರೋತ್ಸಾಹ ನೀಡೋದು
ನಿನ್ನ ಕಲೆಗಾರಿಕೆ
ಕಾಣದಂತೇನೆ ಕಾದಿಟ್ಟ ಈ ಮೋಹ
ಬಂತು ಹೊರಗೇತಕೆ
ಮಿನು ಮಿನುಗಿದೆ ಕಣ್ಣುಗಳಲಿ
ಸವಿಗನಸಿನ ಠೇವಣಿ
ಹೊಸ ಹುರುಪಲಿ ಬೀಸುತಿರುವ
ಗಾಳಿಯೊಡನೆ ಹೂವಿನಂತೆ
ಮಾತಾಡು ನೀ
ಹೇಗಾದರೂ ಮಾತಾಡು ನೀ
ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ
ಚೂರು ಪುಸಲಾಯಿಸು
ಆಡದೆ ಇದ್ದ ಪ್ರೀತಿನೆ ಬಲು ಚೆಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ
ಪಿಸು ನುಡಿಗಳ ಸಂದನಿ
ನಸು ಬೆಳಕಲಿ ನೀಯುತಿರುವ
ತೀರದೊಡನೆ ತೆರೆಗಳಂತೆ
ಮಾತಾಡು ನೀ
ಇನ್ನಾದರೂ ಮಾತಾಡು ನೀ
ಹೃದಯದ ಮೌನ ಹೃದಯಕೆ ಸೀದ
ತಲುಪುವ ಹಾಗೆ ಮಾತಾಡು ನೀ
ಎನಾದರೂ ಮಾತಾಡು ನೀ
ಮಾತಾಡು ನೀ

0 Comments