ಅವನದೇ ಯೋಚನೆ ಶುರುವಾಗಿದೆ ಸುಮ್ಮನೆ
ಅವನದೇ ಕಲ್ಪನೆ ತಲೆ ಕೆಡಿಸಿದೆ ದಿನೇ ದಿನೇ
ಮನದ ಮನದಲಿ ಅವನದೇ ಯಾತನೆ
ಒಳಗೊಳಗೇ ನಾನು ನನ್ನೊಳಗೆ ನಾನು ಸುಳ್ಳೊಂದ ಕಲಿತಂತಿದೆ
ಬಣ್ಣವ ಎರಚಿದೆ ನನ್ನಯ ಮನಸಿಗೆ
ಭಾವುಕ ಮನಸಿದು ಈ ಕ್ಷಣ ಮಿಡಿದಿದೆ
ಹೃದಯಕೆ ಕಚಗುಳಿ ಇಟ್ಟೆ ನೀ ಹೇಳದೆ
ಆನೆಯ ನಡಿಗೆಯ ಹುಡುಗನೇ ಮನಸಾಗಿದೆ
ಮನಸಾಗಿದೆ ಹುಡುಗ ಮನಸಾಗಿದೆ
ನಿನ್ನ ಮೇಲೆ ನನಗೆ ಮನಸಾಗಿದೆ
ಅವನದೇ ಯೋಚನೆ ಶುರುವಾಗಿದೆ ಸುಮ್ಮನೆ
ಹೃದಯದ ಅಪಹರಣ ಹೃದಯಕೆ ತಿಳಿಯದು
ಪ್ರೀತಿಯ ಪರವಶ ಪ್ರೀತಿಗೆ ತಿಳಿಯದು
ಕಾಮನ ಬಿಲ್ಲಲಿ ಜಾರಿ ಹೋದೆನಾ
ಮುಗಿಲನು ಚುಂಬಿಸೋ ಆಸೆಯ ಮನಸಾಗಿದೆ
ಮನಸಾಗಿದೆ ಹುಡುಗ ಮನಸಾಗಿದೆ
ನಿನ್ನ ಮೇಲೆ ನನಗೆ ಮನಸಾಗಿದೆ
ಅವನದೇ ಕಲ್ಪನೆ ತಲೆ ಕೆಡಿಸಿದೆ ದಿನೇ ದಿನೇ
ಮನದ ಮನದಲಿ ಅವನದೇ ಯಾತನೆ
ಒಳಗೊಳಗೇ ನಾನು ನನ್ನೊಳಗೆ ನಾನು ಸುಳ್ಳೊಂದ ಕಲಿತಂತಿದೆ

0 Comments