ಸದಾ ನಿನ್ನ ಕಣ್ಣಲೀ ನನ್ನ ಬಿಂಬ ಕಾಣಲು
ತುದೀಗಾಲಿನಲ್ಲಿ ತಯಾರಾದೆ ನಾನು
ನಿನ್ನದೇ ಗುರುತು ಕಣ್ಣಲ್ಲೇ ಕುಳಿತು
ನನ್ನೆದೆಯ ಸ್ಥಿತಿಯೇ ನಾಜೂಕು
ನಿನಗೆಂದೇ ಬಾಳುವೆ… ಹಠ ಮಾಡಿ ನಾನು
ಸದಾ ನಿನ್ನ ಕಣ್ಣಲೀ ನನ್ನ ಬಿಂಬ ಕಾಣಲು
ತುದೀಗಾಲಿನಲ್ಲಿ ತಯಾರಾದೆ ನಾನು
ಬಲು ಭಾವುಕ ಬದಲಾವಣೆ ನನ್ನಲ್ಲಿ ನೀ ತಂದೆ… ಈಗ
ಅಲೆದಾಡುವ ಅಪರೂಪವ ನಿನ್ನಲ್ಲಿ ನಾ ಕಂಡೆ.. ಓಓ..
ನೀನೆ ಬಣ್ಣ, ನೀನೆ ನಕಾಶೆ ನೀನೆ ನನ್ನ ದಿವ್ಯ ದುರಾಸೆ
ನೀನೆ ವಾರ್ತೆ, ನೀನೆ ವಿಹಾರ, ನೀನೆ ದಾರಿ, ನನ್ನ ಬಿಡಾರ
ನೆನಪಾದರೆ ಸಾಕು ಎದುರು ನೀನೆ ಬೇಕು
ಬಿಡಲಾರೆ ನಿನ್ನನು ಸಲೀಸಾಗಿ ನಾನು
ಸದಾ ನಿನ್ನ ಕಣ್ಣಲೀ ನನ್ನ ಬಿಂಬ ಕಾಣಲು
ಮರುಳಾಗಿ ಹೋದೆನು ಸುಮಾರಾಗಿ ನಾನು
ಕನಸನು ಗುಣಿಸುವಂತ, ನೆನಪನು ಎಣಿಸುವಂತಾ
ಹೃದಯದ ಗಣಿತ ನೀನು
ನನ್ನ ಜೀವ, ನಿನ್ನ ಸಮೀಪ ಬೇರೆ ಏನು ಇಲ್ಲ ಕಲಾಪ
ನೀನೆ ಮೌನ, ನೀನೆ ವಿಳಾಸ ನೀನೆ ನನ್ನ ಖಾಯಂ ವಿಳಾಸ
ಬಳಿ ಇದ್ದಾರೆ ನೀನು, ಮರಳಬಾರದಿನ್ನೂ
ನಿನ್ನನ್ನೇ ನಂಬುತಾ ಬಚಾವಾದೆ ನಾನು
ಸದಾ ನಿನ್ನ ಕಣ್ಣಲೀ ನನ್ನ ಬಿಂಬ ಕಾಣಲು
ತುದೀಗಾಲಿನಲ್ಲಿ ತಯಾರಾದೆ ನಾನು

0 Comments