ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರೀತಳೆ ಓಲೆಯ
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತಾ ಸನ್ನೆಲೆ ಕರಿತಾನೆ ಮಾರಾಯ
ಮನಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು ಕ್ಷೇಮವೆ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯಾ
ಪ್ರೀತಿ ಪ್ರತಿ ಪದ ಶುಭಾಶಯಾ
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರೀತಳೆ ಓಲೆಯ
ಜೊತೆಯಾಗಿ ಬಹುದೂರ ಹೊಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲಾ
ತುಸು ದೂರ ನಸು ನಕ್ಕು ಸಾಗೋಣ
ಪ್ರೀತಿನ ಪತ್ತೆ ಮಾಡೊ ಹಂಬಲ
ಇವನ್ಯಾರೊ ಬೈರಾಗಿ...
ಬಂದಾನೊ ನನಗಾಗಿ...
ಬಿಡಿಗಾಸು ಬದಲಾಗಿ ನನ್ನ ಮೇಲೆ ಮನಸಾಗಿ
ಕಣ್ಣಾ ಜೋಲಿಗೆ ಇಟ್ಟಾ ಎದುರಿಗೆ ಕಳ್ಳಾ ಕಿರುನಗೆ
ಅತಿ ಅತಿ ಸಿಹಿ ಸುಳ್ಳುಗಳು....
ಇದೆ ನಿಜ ಅನ್ನೋ ಪ್ರೇಮಿಗಳು....
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತಾ ಸನ್ನೇಲೆ ಕರೀತಾನೆ ಮಾರಾಯ
ತುಂಬಾನೆ ಹುಶಾರಾಗಿ ಇದ್ದೆನು
ಹಾಗಿದ್ದು ನಾ ಪ್ರೀತಿಲಿ ಬಿದ್ದೆನು
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೊ ಇನ್ನು ಕಾಲ ಕೇಳಿತು
ಮನಸೇಳೊ ವಿಷಯಾನ
ಮರೆಯೋದು ಸರಿಯೇನಾ
ಕೊಡುಬಾರೆ ಹೃದಯಾನ ಬಿಡು ನಿನ್ನ ಬಿಗುಮಾನ
ನಲ್ಲೆ ನಲ್ಮೆಯ ನಲ್ಲೆ ನಮ್ಮಯ
ಅತಿ ಅತಿ ಸಿಹಿ ಕವಿತೆಗಳು
ಇದೆ ನಿಜ ಅನ್ನೊ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರೀತಳೆ ಓಲೆಯ
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತಾ ಸನ್ನೆಲೆ ಕರಿತಾನೆ ಮಾರಾಯ
ಮನಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು ಕ್ಷೇಮವೆ ನೀನು ಅಂತ ಬರೆದನು
ಅತಿ ಅತಿ ಸಿಹಿ ಶುಭಾಶಯಾ
ಪ್ರೀತಿ ಪ್ರತಿ ಪದ ಶುಭಾಶಯಾ

0 Comments