ಮಾತಿನಲ್ಲಿ ಹೇಳಬಲ್ಲೆನು
ರೇಖೆಯಲ್ಲು ಗೀಚಬಲ್ಲೆನು
ನಿನ್ನ ಹಿಂದೆ ಮುಂದೆ ಹೀಗೆ ಕುಣಿಯಬಲ್ಲೆನು
ನೀನೆ ನನ್ನಯಾ ಅಂದಗಾರನು
ನನ್ನ ಕಾಡುವ ಚಂದ ಪೋರನು
ನಿನ್ನ ಪ್ರೇಮ ರೋಗ ನಾನೀಗ ವಾಸಿ ಮಾಡಲೇನು
ನೀನೆ ನನ್ನಯಾ ಅಂದಗಾರನು
ನೋಡಬೇಡವೋ ಇನ್ನು ಯಾರನು
ನಮ್ಮಿಬ್ಬರ ಈ ಕುರಿತಾಗಿಯೆ
ಊರೆಲ್ಲವೂ ತಾ ಮತಾಡಲಿ
ನಿನ್ನೊಂದಿಗೆ ನಾ ಓಡಾಡಲು
ಬಾಲಿಕೆಯರು ಗೋಲಾಡಲೀ,,,
ಸುತ್ತ ಯಾರು ಇಲ್ಲದಾಗ ಮುತ್ತನೊಂದು ನೀಡು ಬೇಗ
ಮತ್ತೆ ಏನು ಆಗದಂತೆ ಮುಂದೆ ಸಾಗುವಾ
ನಿನ್ನ ಪ್ರೀತಿಯನ್ನು ಸರಿಯಾಗಿ ಹೇಳಬೇಕು ನೀನು
ನೀನೆ ನನ್ನಯಾ ಅಂದಗಾರನು
ನೋಡಬೇಡವೋ ಇನ್ನು ಯಾರನು
ಮಾತಿನಲ್ಲಿ ಹೇಳಬಲ್ಲೆನು
ರೇಖೆಯಲ್ಲು ಗೀಚಬಲ್ಲೆನು
ನಿನ್ನ ಹಿಂದೆ ಮುಂದೆ ಹೀಗೆ ಕುಣಿಯಬಲ್ಲೆನು
ಶೃತಿ ನೀಡಿದೆ ಈ ಆವೇಗವು
ಸವಿ ಭಾವದ ನಿನ್ನ ಸಹವಾಸಕೆ...
ಬೇಕಾಗಿದೆ ಜೊತೆ ಏಕಾಂತವೂ ಹೋಗೊಣವೆ ಸಣ್ಣ ವನವಾಸಕೆ
ನಿನ್ನೆ ಕನಸಿನಲ್ಲಿ ನಾನು
ನಿನ್ನ ಕಂಡ ಜಾಗವನ್ನು
ಕಣ್ಣು ತೆರೆದು ಈಗ ನಾವು ಮತ್ತೆ ನೋಡುವ
ನಿನ್ನ ಹೃದಯದಲ್ಲಿ
ನಾನೊಮ್ಮೆ ಇಣುಕಿ ನೋಡಲೇನು
ನೀನೆ ನನ್ನಯಾ ಅಂದಗಾರನು
ನೋಡಬೇಡವೋ ಇನ್ನು ಯಾರನು
ಮಾತಿನಲ್ಲಿ ಹೇಳಬಲ್ಲೆನು
ರೇಖೆಯಲ್ಲು ಗೀಚಬಲ್ಲೆನು
ನಿನ್ನ ಹಿಂದೆ ಮುಂದೆ ಹೀಗೆ ಕುಣಿಯಬಲ್ಲೆನು
ನೀನೆ ನನ್ನಯಾ ಅಂದಗಾರನು
ನನ್ನ ಕಾಡುವ ಚಂದ ಪೋರನು
ನಿನ್ನ ಪ್ರೇಮ ರೋಗ ನಾನೀಗ ವಾಸಿ ಮಾಡಲೇನು
ನೀನೆ ನನ್ನಯಾ ಅಂದಗಾರನು
ನೋಡಬೇಡವೋ ಇನ್ನು ಯಾರನು

0 Comments