ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು
ಸುಂದರ ಮನಸಲಿ ನಿನ್ನದೇ
ಕನಸಿದೆ ದಿನವೂ ನನ್ನಲಿ
ಅಂದದ ಬದುಕನು ಕಾಣುವ
ಆಸೆಯು ನಿನ್ನದೇ ಜೊತೆಯಲಿ
ನಿನ್ನಲ್ಲೇ ನಿನ್ನಲ್ಲೇ
ನಾನಿಂದು ಇರುವೆನು
ನನ್ನಲ್ಲೇ ನನ್ನಲ್ಲೇ
ನೀನೆಂದು ಇರುವೆಯಾ
ನಿನ್ನಿಂದ ನಾನು
ಹೊಸ ಲೋಕ ಕಂಡೆ
ನಿನ್ ಹಿಂದೆ ಪ್ರತಿ
ದಿನವೂ ಸುತ್ತಾಡಿ ಬಂದೆ
ತಿರುತಿರುಗಿ ನೀನು
ನನ ನೋಡಿದಾಗ
ಆ ನಗುವ ನಾ ನೋಡಿ
ಮನಸೋತು ಹೋದೆ
ಏನಾಗುವುದೋ.. ಏನಾಗುವುದೋ..
ಎಂಬ ಭಯ ನನ್ನ
ತುಂಬಾ ಕಾಡಿದೆ
ಆದರೂನು ನಿನ್ನ ಮೇಲೆ
ನಂಬಿಕೆ ಇದೆ
ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು
ನಿನಗಾಗಿ ನನ್ನೆದೆಯ
ಆಸ್ಥಾನದಲ್ಲಿ
ಅನುದಿನವೂ ಅನುಕ್ಷಣವೂ
ಹೃದಯೋತ್ಸವ
ಮನದ ಈ ಅರಮನೆಯ
ಪ್ರೀತಿಯ ಅಂಗಳದಲ್ಲಿ
ಮುತ್ತುಗಳ ರಾಶಿಯಲಿ
ಪ್ರೇಮೋತ್ಸವ
ಆದರಿಸುವೆಯೋ.. ಅವತರಿಸುವೆಯೋ..
ಎಂಬ ಅನುಮಾನ
ಅನ್ನೋ ಕೊರಗಿದೆ
ಏನೇ ಆದರೂ ನಿನ್ನೊಳಗೆ
ನಾನು ಇರುವೆನೇ
ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು

0 Comments