ನೀ ಸನಿಹಕೆ ಬಂದರೆ ಹೃದಯದ ಗತಿಯೇನು... (Nee Sanihake Bandare) Maleyali Jotheyali



ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು 
ನೀನೇ ಹೇಳು

ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು, ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು
ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದೂ ಘಳಿಗೆ

ನಿನ್ನ ಮಾತು ಏನೇ ಇರಲಿ
ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು
ನೀನೇ ಹೇಳು

ನನ್ನ ಎದೆಯ, ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು

ದಾರಿಯಲ್ಲಿ, ಬುತ್ತಿ ಹಿಡಿದು ನಿಂತ ಸಾಥೀ ನೀನೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು
ನೀನೇ ಹೇಳು

ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು
ಹೇಳು ನೀನು

Post a Comment

0 Comments