ಕಣ್ಣು ಕಣ್ಣುಗಳು ಸೇರಿ.... (Kannu Kannuglu Seri) Arasu


 ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ

 ಮುತ್ತಿನಂತ ನಿನ್ನ ಮಾತು
ಆಹಾ ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.. ಪ್ರೀತಿಗೆ ಹೆಸರಾಗಿ

 ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
 ಆ ನನ್ನಾ ಕನಸು ಇಂದು ನಿಜವಾಯ್ತು

 ಅಂದು ನೀನು ಬಳಿ ಬಂದೆ
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ

 ಇಂದು ನೀನು ಜೊತೆಯಾದೆ
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ ಬೆರೆಯುತ ಹೋದೆ ಹಾ

  ಅರಳಿದ ತನುವು ಕುಣಿದಿದೆ ಮನವು
ಸೋತು ಹೋದೆನು ಜಾಣ
 
 ಸವೆಯದ ನೆನಪು ಸವಿದರೆ ಸಾಕು
ಹಾರಿ ಹೋಗಲಿ ಪ್ರಾಣ
 
 ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ
ನಡೆಸೋಣ ಬಾಳ ಪಯಣ
 
 ಹೇಯ್.ಎಂದೆಂದು ನಿನಗಾಗಿ
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.. ಪ್ರೀತಿಗೆ ಹೆಸರಾಗಿ
 
 ಆಹಾ.. ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
 
 ಹಾ ಮುತ್ತಿನಂತ ನಿನ್ನ ಮಾತು
ಅಹಾ ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
 
 ಯಾರು ಇರದ ಮನಸಿನಲಿ
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
 
 ನೀನು ಇರದ ಬಾಳಿನಲಿ
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
 
 ಹಾ ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
 
 ಕನಸಿನ ವಿಷಯ ಹೇಳುವ ಸಮಯ
ಹಾಡು ಅಂತು ಈ ಹರೆಯ
 
  ನಿನ್ನಿಂದ ನಾನು ನಿನಗಾಗಿ ನಾನು
ನಿನ್ನವಳೆ ನಾನು ಗೆಳೆಯ
 
 ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.. ಪ್ರೀತಿಗೆ ಹೆಸರಾಗಿ
 
 ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
 
 ಹಾ... ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
 
 ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ ಹೋಯ್ 

Post a Comment

0 Comments