ಮಿಡಿಯುತಿದೆ ಮಿಡಿಯುತಿದೆ ನನ್ನೆದೆ ನಿನ್ನಯ ಹೆಸರಿನಲಿ
ತುಡಿಯುತಿದೆ ತುಡಿಯುತಿದೆ ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ ಹೇಗಿದನು ಹಿಡಿದಿದಲಿ
ನಣ್ಣಾನೆ ನಾ ಕಾಣೆ ಓ ಪ್ರೀತಿಯೇ
ಮಿಡಿಯುತಿದೆ ಮಿಡಿಯುತಿದೆ ನನ್ನೆದೆ ನಿನ್ನಯ ಹೆಸರಿನಲಿ
ತುಡಿಯುತಿದೆ ತುಡಿಯುತಿದೆ ಜೀವವು ಜೀವದ ನೆನಪಿನಲಿ
ಎದೆಯಲಿ ತುಂಬೊದು ಯಾರು ಹುಚ್ಚು ಹಿಡಿಸೊ ಪ್ರೀತಿಯಾ
ಹೃದಯದಿ ಒಂದೊಂದು ಚೂರು ಹೊತ್ತಿ ಉರಿಸೊ ಜ್ವಾಲೆಯಾ
ನೆರಳು ಕೂಡ ನಲಿಯುವಾ ಒಲವು ಎಂತಾ ಅನುಭವಾ
ಜಗದ ನೋವು ಮರೆಸುವಾ ಮದುರ ಪ್ರೀತಿ ಕಲರವ
ನೀನಿಲ್ಲದೆ ಈ ಲೋಕವೇ ನಂಗೆನಿದೆ ಓ ಪ್ರೇಮವೇ
ನಿನ್ನಲ್ಲಿದೆ ಒಂದಾಗಿದೆ ನಿಂದಾಗಿದೆ ಈ ಜೀವವೇ....
ಮಿಡಿಯುತಿದೆ ಮಿಡಿಯುತಿದೆ ನನ್ನೆದೆ ನಿನ್ನಯ
ಹೆಸರಿನಲಿ.... ಹೆಸರಿನಲಿ.....ಹೆಸರಿನಲಿ....
ಬದುಕಲೀ ನೀ ಬಂದ ಮೇಲೆ ಬದುಕಬೇಕು ಅನಿಸಿದೆ
ಎದುರಲಿ ನೀ ನಿಂತ ಮೇಲೆ ಬಿಸಿಲು ತಾನು ತಂಪಿದೆ
ನನಗೆ ನಾನೆ ಹೊಸಬಳು ಅನಿಸುವಂತ ಕ್ಷಣಗಳು
ತಿಳಿಯದೇನೆ ಎದೆಯೊಳು ನಡದೆವುದೇನೊ ನಡೆಗಳು
ಏನಾಗಿದೇ ಏನಾಗಿದೇ ನಂಗೀದಿನ ಏನಾಗಿದೇ.....
ಯಾಕಾಗಿದೆ ಯಾಕಾಗಿದೆ ನಂಗೀತರ ಯಾಕಾಗಿದೇ....
ಮಿಡಿಯುತಿದೆ ಮಿಡಿಯುತಿದೆ ನನ್ನೆದೆ ನಿನ್ನಯ ಹೆಸರಿನಲಿ
ತುಡಿಯುತಿದೆ ತುಡಿಯುತಿದೆ ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ ಹೇಗಿದನು ಹಿಡಿದಿದಲಿ
ನಣ್ಣಾನೆ ನಾ ಕಾಣೆ ಓ ಪ್ರೀತಿಯೇ... ಓ ಪ್ರೀತಿಯೇ

0 Comments