ಯಾರೋ…. ಕಣ್ಣಲ್ಲಿ ಕಣ್ಣನಿಟ್ಟು.... (Kanninalli Kannanittu) Orata I Love You


ಯಾರೋ…. ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ

ಯಾರೋ…. ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದ್ದಂಗ್ ಇದ್ದು
ಎದ್ದು ಹೋದೋರ್ ಯಾರು

ಅವಳ್ಯಾರೋ ಹುಡುಗಿ ನನ್ನನ್ನೇ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೇ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ...........

ಯಾರೋ…. ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ

ಯಾರೋ…. ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದ್ದಂಗ್ ಇದ್ದು
ಎದ್ದು ಹೋದೋರ್ ಯಾರು
 
ಒಂದೊಂದು ಹುಡ್ಗೀರಲ್ಲೂ
ನೂರು ನೂರು ಕನಸು ಉಂಟು
ಯಾರು ಎಲ್ಲೂ ಹೇಳೊದಿಲ್ಲ
ಹಾಗಂತ ಯಾರು ಕೂಡ
ಪ್ರೀತಿ ಮಾಡೋದಿಲ್ಲ ಅಂತ
ಎಂದು ಬಾಯಿ ಬಿಡೋದಿಲ್ಲ‌

ನನ್ನಂತ ಹುಡುಗರಿಗೆ
ಪ್ರೇಮ ಗೀಮ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೇ ಇಲ್ಲ
ಎಲ್ಲಿಂದ ಬಂದ್ಲೋ ಇವಳು
ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಲ್ತಾಳಲ್ಲ

ಇದು ಪ್ರೀತಿಯಲ್ಲ ಪ್ರೇಮನು ಅಲ್ಲ
ಬರೀ ಸ್ನೇಹ ಅಲ್ಲ ಅಂತ ಹೇಳುತಿಲ್ಲ
ಅದೇನೋ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ...........

ಯಾರೋ…. ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ

ಯಾರೋ…. ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದ್ದಂಗ್ ಇದ್ದು
ಎದ್ದು ಹೋದೋರ್ ಯಾರೋ‌
ಹೋದೋರ್ ಯಾರೋ ಹೋದೋರ್ ಯಾರೋ
 
ಪ್ರೀತಿಲಿ ಸೋಲೆ ಇಲ್ಲ
ಸೋತ ಮೇಲೆ ಬದುಕೇ ಇಲ್ಲ
ಬದುಕು ಒಂದು ಒಗಟಿನಂತೆ

ಈ ನನ್ನ ಬದುಕಿನಲ್ಲಿ
ನನ್ನವರು ಯಾರು ಇಲ್ಲ
ನಾನು ಒಬ್ಬ ಒರಟನಂತೆ

ಈಗಷ್ಟೇ ಈಗ ಅಷ್ಟೇ
ಯಾರೋ ನನ್ನ ಎದೆಗೆ ಕನ್ನ
ಹೊಡೆದು ಹೊಡೆದು ಹೋದಂತೆ

ನನ್ನಲ್ಲೇ ಏನೋ ಒಂದು
ಕಳೆದುಕೊಂಡ ಹಾಗೆ ಇಂದು
ಆಗೆ ಹೋಯ್ತು ಮಿಂಚಿನಂತೆ

ಅರೆ ತಾಳಲಾರೆ ಮಾತಾಡಲಾರೆ
ಅದೇಕೆ ಅಂತ ನಾ ಹೇಳಲಾರೆ
ನೀ ಯಾರೇ ಆಗಿರು ನೀ ಎಲ್ಲೆ ಅವಿತಿರು
ನೀ ಇಲ್ಲದೇನೆ ನಾ ಬಾಳಲಾರೆ…

ಯಾರೋ…. ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ

ಯಾರೋ…. ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದ್ದಂಗ್ ಇದ್ದು
ಎದ್ದು ಹೋದೋರ್ ಯಾರು

ಅವಳ್ಯಾರೋ ಹುಡುಗಿ ನನ್ನನ್ನೇ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೇ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ.....

ಯಾರೋ ರರರರರರರ ರರರರರ ರರರರರ 
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ

ಯಾರೋ ರರರರರರರ ರುರುರು ರುರುರುರು 
ಇಲ್ಲೆ ಇದ್ದಂಗ್ ಇದ್ದು ಎದ್ದು  ಹೋದೋರ್ ಯಾರು
ಹೋದೋರ್ ಯಾರೋ ಹೋದೋರ್ ಯಾರೋ

ಯಾರೋ…. ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದ್ದಂಗ್ ಇದ್ದು
ಎದ್ದು ಹೋದೋರ್ ಯಾರೋ
ಹೋದೋರ್ ಯಾರೋ ಹೋದೋರ್ ಯಾರೋ

Post a Comment

0 Comments