ಮುದ್ದಾಗಿ ನೀನು ನನ್ನಾ ಕೂಗಿದೆ.....(Kanasalli Kanda Nanthara) Ganapa


ಮುದ್ದಾಗಿ ನೀನು ನನ್ನಾ ಕೂಗಿದೆ
ಸದಸ್ದಿಲ್ಲದೆನೆ ಸುದ್ದಿಯಾಗಿದೆ
ಇಂದಲ್ಲ ನಾಳೆ ಏನೊ ಕಾದಿದೆ
ನಿಂತಲ್ಲೆ ಬಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೊ ಕಾದಿದೆ

ಕನಸಲ್ಲಿ ಕಂಡ ನಂತರ
ಭಯವೆಲ್ಲ ಮಾಯವಾಗಿದೆ
ನೆನಪನ್ನು ತುಂಬಿಕೊಳ್ಳಲು
ಹೃದಯಾನು ಸಾಲದಾಗಿದೆ
ಮೊದಲೇನೆ ಹೇಳಿಬಿಡುವೆನು
ನನಗಂತು ಪ್ರೀತಿಯಾಗಿದೆ

ಅಲೆಮಾರಿಯಾದ ಜೀವದ
ಮನವೀಗ ಸೂರೆಯಾಗಿದೆ
ಉಳಿತಾಯ ಇಲ್ಲದಿದ್ದರು
ಒಲವೊಂದೆ ಆಸ್ತಿಯಾಗಿದೆ
ಸೆರೆಯಲ್ಲಿ ಸಿಕ್ಕ ಮೇಲೆಯೆ
ಪರದಾಟ ಜಾಸ್ತಿಯಾಗಿದೆ

ಮುದ್ದಾಗಿ ನೀನು ನನ್ನಾ ಕೂಗಿದೆ
ಸದಸ್ದಿಲ್ಲದೆನೆ ಸುದ್ದಿಯಾಗಿದೆ
ಇಂದಲ್ಲ ನಾಳೆ ಏನೊ ಕಾದಿದೆ
ನಿಂತಲ್ಲೆ ಬಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೊ ಕಾದಿದೆ

ಬೆರಗಾಗಿ ನೀನು ಕಚ್ಚಿದ
ಬೆರಳೆಷ್ಟು ಪುಣ್ಯ ಮಾಡಿದೆ
ನೆರಳಲ್ಲಿ ನೀನು ನಿಂತಿರೊ
ಮನ ಕೂಡ ಧನ್ಯವಾಗಿದೆ
ಪದವಾಗಿ ನಿನ್ನ ಕೊರಳಲಿ
ಇರುವಂತ ಆಸೆಯಾಗಿದೆ

ಸೆಳೆತಕ್ಕೆ ಸಿಕ್ಕ ನನ್ನಯ
ನಡಿಗೇನೆ ಬೇರೆಯಾಗಿದೆ
ಪರಿಶುದ್ದ ಒಂಟಿ ಜೀವನ
ನಿಜವಾಗಿ ಬೇಡವಾಗಿದೆ
ಚೆಳುವೆ ನೀ ಹೇಳು ಬೇಗನೆ
ನಿನಗೂನು ಹೀಗೆ ಆಗಿದೆ

ಮುದ್ದಾಗಿ ನೀನು ನನ್ನಾ ಕೂಗಿದೆ
ಸದಸ್ದಿಲ್ಲದೆನೆ ಸುದ್ದಿಯಾಗಿದೆ
ಇಂದಲ್ಲ ನಾಳೆ ಏನೊ ಕಾದಿದೆ
ನಿಂತಲ್ಲೆ ಬಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೊ ಕಾದಿದೆ

Post a Comment

0 Comments