ನನ್ನ ಚೆಳುವೆ ನನ್ನ ಚೆಳುವೆ
ಸಾವಿರ ಹೂಗಲಿಗಿಂತ ಚೆಳುವೆ
ನನ್ನ ಚೆಳುವೆ ಮುದ್ದು ಚೆಳುವೆ
ಚೈತ್ರದ ಚಂದ್ರನಿಗಿಂತ ಚೆಳುವೆ
ನಾನಿವಳ ನಗೆಯ ತುಂಬ ತುಂಬಿಕೊಳಲೇ
ಹಾಗೆ ನಿನ್ನ ಮೇಲೆ ಒಮ್ಮೆ ಹರಿದು ಬಿಡಲೇ
ಲಾಲಲಲಲ
ನನ್ನ ಚೆಳುವೆ ನನ್ನ ಚೆಳುವೆ
ಸಾವಿರ ಹೂಗಲಿಗಿಂತ ಚೆಳುವೆ
ನನ್ನ ಚೆಳುವೆ ಮುದ್ದು ಚೆಳುವೆ
ಆ ಸೂರ್ಯನಿಗೆ ನೀ ಕಾಣದಿರು
ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು
ನಿನ್ನ ಕದ್ದು ಕೊಂಡೊಯ್ಯುವನು
ಅಗೊ ಅಗೊ ಆ ತಾರೆಯು
ಹಿಗೊ ಹಿಗೊ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂವೊಡಲ ರಮಿಸಿದೆ
ಸರಿಯೇ ಹೇಳು
ಲಾಲಲಲಲ
ನನ್ನ ಚೆಳುವೆ ನನ್ನ ಚೆಳುವೆ
ಸಾವಿರ ಹೂಗಲಿಗಿಂತ ಚೆಳುವೆ
ನನ್ನ ಚೆಳುವೆ ಮುದ್ದು ಚೆಳುವೆ
ನಿನ್ನಂದದಲಿ ನಾ ಮೈತೊಳೆದು
ಶೃಂಗಾರವನೆ ಸೆರೆ ಹಿಡಿವೆ
ಈ ಹೂನಗೆಯ ನಾ ಬೊಗಸೆಯಲಿ
ಪಡೆದು ನನ್ನೆದೆಗೆ ಅರ್ಪಿಸುವೆ
ನನ್ನ ತುಂಬಾ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರ ಉಸಿರಿನಲಿ ಚಲನವೊ
ಹೃದಯ ಹೃದಯಗಳ ಮಿಲನವೊ
ಇದುವೇ... ಪ್ರೇಮ
ಲಾಲಲಲಲ
ನನ್ನ ಚೆಳುವೆ ನನ್ನ ಚೆಳುವೆ
ಸಾವಿರ ಹೂಗಲಿಗಿಂತ ಚೆಳುವೆ
ನನ್ನ ಚೆಳುವೆ ಮುದ್ದು ಚೆಳುವೆ
ಚೈತ್ರದ ಚಂದ್ರನಿಗಿಂತ ಚೆಳುವೆ
ನಾನಿವಳ ನಗೆಯ ತುಂಬ ತುಂಬಿಕೊಳಲೇ
ಹಾಗೆ ನಿನ್ನ ಮೇಲೆ ಒಮ್ಮೆ ಹರಿದು ಬಿಡಲೇ
ಲಾಲಲಲಲ ಲಲಲಲಲ ಲಲಲಲಲ
ನಾನನ ನಾನನ ನಾನನನಾ

0 Comments