ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ಚಿಗುರೊಡೆದ ಹೃದಯದಲಿ ಉದಯಿಸಿದೆ ಅದು ಏನೊ
ಅರಿಯದೆ ಹೋದೆನು ನಾ..........
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ನನ್ನ ಮನ ಹಕ್ಕಿಯಂತೆ ಹಾರುತಿದೆ
ಸಂತಸದ ಅಮಲಿನಲಿ
ಜಿಂಕೆಯಂತೆ ಏಕೊ ಇಂದು ಕುಣಿಯುತಿದೆ
ಉಲ್ಲಾಸದ ಚಿಲುಮೆಯಲಿ
ಇದೆನಿದು ವೈಯಾರವು ನನ್ನ ತುಂಬ ತುಂಟಾಟವು
ಕನಸುಗಳ ಬಾಚಿಕೊಳ್ಳುವೆ ಆಸೆಗಳ ಅಪ್ಪಿಕೊಳ್ಳುವೆ
ಮುಗಿಲಲೆ ನಾ ನಡೆವೇ....
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ಹೆಣ್ಣಿಗೊಂದು ಆಸೆ ಬಂದರೆ ಏನು ಚಂದವೋ
ಅವಳಿಗಿಂತ ಏನು ಅಂದವೋ
ಕನಸುಗಳ ಬಾಗಿಲಲ್ಲಿ ನಿಂತುಕೊಂಡರೆ
ನಾಚಿಕೆಯು ಅವಳಿಗಂದವೂ......
ದಿನಾ ದಿನಾ ನಿನ್ನ ಜೊತೆ ನನ್ನ ನಿನ್ನ ಹೊಸ ಕತೆ
ತಿಳಿಸಿದೆಯಾ ಕಳಿಸಿದೆಯಾ ಹೆಣ್ಮನವಾ ತುಂಬಿದೆಯಾ
ಪಳಕಿತಳಾದೆನು ನಾ......
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ
ಚಿಗುರೊಡೆದ ಹೃದಯದಲಿ ಉದಯಿಸಿದೆ ಅದು ಏನೊ
ಅರಿಯದೆ ಹೋದೆನು ನಾ..........
ಮಂದಾರವೆ ಅರಳುತಿದೆ ಚಿತ್ತಾರವಾ ಬರೆಯುತಿದೆ

0 Comments