ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೇ ನನ್ನ ಮೈ ಪುಳಕ ನೆನಪೆ ನನ್ನ ಮೈ ಜಳಕ
ನೆನಪೇ ನನ್ನ ಧನತನಕ ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ನದಿಯ ಅಲೆಯಲ್ಲಿ ನಿನ್ನ ನಗೆಯ ಸವಿನೆನಪು
ಚಿಗುರೊ ಎಲೆಯಲ್ಲಿ ನಿನ್ನ ಲಜ್ಜೆಯ ಸವಿನೆನಪು
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದ ಸವಿನೆನಪು
ರೆಪ್ಪೆ ತೆರೆಯುವಾ ನೆನಪೆ ಪ್ರೇಮದರ್ಥವೋ
ಹೃದಯ ತೆರೆಯುವಾ ನೆನಪೆ ಸುಪ್ರಭಾತವೂ
ಯಾರೊ ಬರೆದೊರು ನನ್ನೆದೆಯಾ ಲಾಲಿ
ಕೇಳೊ ಕ್ಷಣವೆಲ್ಲ ಸವಿನೆನಪಿನ ರಂಗೋಲಿ
ಚಲಿಸೊ ಮೋಡದಲಿ ನಿನ್ನ ತಳುಕಿನ ಸವಿನೆನಪು
ಉಕ್ಕೋ ಕಡಲಲ್ಲಿ ನಿನ್ನ ಆಸೆಯ ಸವಿನೆನಪು
ಗುಡಿಯಲಿ ದೇವರ ದೀಪದಲಿ ನಿನ್ನ ಪ್ರತಿರೂಪದ ನೆನಪು
ಚೆಲುವು ತೆರೆಯುವಾ ನೆನಪೆ ಪ್ರೇಮದರ್ಥವೋ
ಹೃದಯ ತೆರೆಯುವಾ ನೆನಪೆ ಬಾಳಿಗರ್ಥವೋ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೇ ನನ್ನ ಮೈ ಪುಳಕ ನೆನಪೆ ನನ್ನ ಮೈ ಜಳಕ
ನೆನಪೇ ನನ್ನ ಧನತನಕ ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ

0 Comments