ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ... (Ninagende Visheshavada Mahithi) Prithvi


ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ ಮಾತನಾಡದೆ ಏನನೂ, ನೀನು ಕೂತಿರು ಕಣ್ಣಲ್ಲಿ

ನನಗಂತೂ ವಿಶೇಷವಾದ ಅಕ್ಕರೆ ನಿನ್ನಲ್ಲಿ
ನಿನಗಿಂತ ವಿಶೇಷವಾದ ಅಚ್ಚರಿ ಇನ್ನೆಲ್ಲಿ
ಈಗ ನೀನು ಎಲ್ಲಿಯೇ ಹೋದರೂ, ನಾನು ಹಾಜರು ಬೆನ್ನಲ್ಲಿ

ನೀ ನೋಡುತ ಮೈಯ ಮರೆವಾಗ,
ಸಂತೋಷವೇ ರೂಪುಗೊಂಡಂತೆ
ಈ ತೋಳಿನ ಬಂಧ ತೊರೆದಾಗ
ಮುಂಜಾವಲಿ ಕನಸು ಕಂಡಂತೆ

ಕೈಯಲ್ಲಿ ಕೈ ಇದ್ದರೆ, ನಮ್ಮ ಹೆಜ್ಜೆ ಒಂದಾಗಿದೆ
ಗಡಿಯಾರ ಬಂದಾಗಿದೆ, ಓಹೋ! ಓ
ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ,
ಈಗಂತು ಹುಚ್ಚಾಗಿದೆ, ಓಹೋ ಓ

ನಿನಗೆಂದೇ ವಿಶೇಷವಾದ ಮೋಹವು ನನ್ನಲ್ಲಿ
ನಿನಗಿಂತ ವಿಶೇಷವಾದ ಜೀವವು ಇನ್ನೆಲ್ಲಿ

ನಾನಾಡಲು, ಹೋದ ಮಾತೆಲ್ಲ ,
ನೀ ಸೋಕಲು ಪೂರ್ತಿಯಾದಂತೆ
ಮಾತಿಲ್ಲದೆ ಮುದ್ದುಗರೆವಾಗ
ಈ ಬಾಯಿಗೆ ಜೀವ ಬಂದಂತೆ
ಬರಿ ನಿನ್ನ ಕುರಿತಾಗಿಯೇ ನನ್ನ ಹೃದಯ ಪರದಾಡಿದೆ
ನಿನ್ನತ್ತ ಸರಿದಾಡಿದೆ, ಓಹೋ ಓ
ಹೊಸದಾಗಿ ನಿನ್ನೊಂದಿಗೆ, ಮತ್ತೆ ಮತ್ತೆ ಒಲವಾಗಿದೆ
ಇನ್ನೂನು ಬಲವಾಗಿದೆ, ಓಹೋ ಓ

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈ ಮಾತನಾಡದೆ ಏನನೂ, ನೀನು ಕೂತಿರು ಕಣ್ಣಲ್ಲಿ

Post a Comment

0 Comments