ಮರೆತೆನು ನನ್ನ ಚುರುಕಿನ ಚಟುವಟಿಕೆ.... (Yeno Nannali Shuruvagide) The Great Story of Sodabuddi


ಏನೊ ನನ್ನಲ್ಲಿ ಶುರುವಾಗಿದೆ ಹೊಸ ಯೋಚನೆಯದು ಏನೊ
ಕಣ್ಣಲ್ಲಿ ಬಲವಾಗಿದೆ ಹೊಸ ಯೋಜನೆಯದು ಏನೊ
ಪ್ರೀತಿಯಲಿ ಬೀಳುವ ಸೂಚನೆಯೆ ಇದು ನಿಜವೇನೊ
ಏನಾದರು ಸರಿಯೆ ಪರಿಹಾರವು ನೀನೆನೊ

ಒಲವಿನ ಸಹಿ ಹಾಕಿದ ಬರವಣಿಗೆ
ಅದುವೆ ಮೆರವಣಿಗೆ
ಸನಿಹದ ಸಲುಗೆ ನಾ ಬಯಸುತ
ಹಗಳು ಇರುಳು ನಿನಗೆ ಮರುಳಾದೆ

ಬಡುವಿನ ಕ್ಷಣವಿಲ್ಲದ ಬೆಳವಣಿಗೆ
ಮೆಲ್ಲನೆ ಶುರುವಾಗಿದೆ
ದಿನಚರಿ ಮರೆಯುತ ನಾ ಈಗ
ಹಗಳು ಇರುಳು ನಿನಗೆ ಮರುಳಾದೆ

ನಯನದಲಿ ಬರುವೆ ನೀ ಜಾಹಿರಾತಿನಂತೆ
ಉಸಿರಿನಲಿ ಬೆರೆತೆ ಆ ಜಾದುಗಾರ ಬರುವಂತೆ
ಮನಸಿನಲಿ ಗಲಬೆ ಖುಷಿಯ ಮೇಳದಂತೆ
ಅನಿಸಿಕೆಯ ತಿಳಿಸು ನಿನ್ನ ಒಳಗು ಹೀಗೆ ಆಗಿದೆಯೊ
ದಿನವು ಕ್ಷಣವು ನೀನೆ ಬೇಕು ಅಂತನಿಸುತಿದೆ

ಮರೆತೆನು ನನ್ನ ಚುರುಕಿನ ಚಟುವಟಿಕೆ
ನಿನದೆ ಚಡಪಡಿಕೆ
ಮೊದಲನೆ ಭೇಟಿಯ ಮೆಲುಕಾಕುತ
ಹಗಳು ಇರುಳು ನಿನಗೆ ಮರುಳಾದೆ

ನಿನ್ನ ಗುಂಗಲಿ ಅಡಗಿದೆ ಚೇತರಿಕೆ
ಅದುವೆ ಕನವರಿಕೆ
ಹೊಸ ಆಸೆಗೆ ಪ್ರೇರಣೆ ನೀಡುತ
ಹಗಳು ಇರುಳು ನಿನಗೆ ಮರುಳಾದೆ

ಇದುವರೆಗು ಯಾರೊ ನೀ ದಾರಿಹೊಕನಂತೆ
ಇದೆ ಮೊದಲು ಅದೇ ದಿನ ದಾರಿಯ ಕಾಯುವಂತೆ
ಕೊನೆವರೆಗು ಇರುವೆ ಹೆಸರಾ ಹಚ್ಚೆಯಂತೆ
ಪ್ರೀತಿಯಲಿ ಹೃದಯ
ಎರಡು ಜೀವಕು ವೇದಿಕೆ ಆಗಿದೆಯೊ
ದಿನವು ಕ್ಷಣವು ನೀನೆ ಬೇಕು ಅಂತನಿಸುತಿದೆ

ಚಲಿದಸದೆ ಇರಲಿ ಜಗ ಕೆಲಸಮಯ
ಖಾಸಗಿ ಇದೆ ವಿಷಯ
ಅಡಚನೆ ಇಲ್ಲದ ಕನಸಾಗುತ
ಹಗಳು ಇರುಳು ನಿನಗೆ ಮರುಳಾದೆ

ಒಲಿಸಿದೆ ನನ್ನ ಕೇಳದೆ ಅನುಮತಿಯಾ ಖಾತರಿಪಡಿಸುವೆಯಾ
ಜರುಗಿಸಿ ಜೀವವ ನಿನ್ನ ಪಾಲಿಗೆ
ಹಗಳು ಇರುಳು ನಿನಗೆ ಮರುಳಾದೆ

Post a Comment

0 Comments