ಆಕಾಶ ಭೂಮಿಯ ಮಡಿಲಲ್ಲಿ ಬೆಳೆದಂತ
ಮುದ್ದಾದ ಮಗುವೆನೆ ಈ ಪ್ರೀತಿ
ಎಲ್ಲರ ಹೃದಯದಲಿ ಅರಳುತ್ತಾ ನಲಿಯುತ್ತಾ
ತಂಪೆರೆವ ತಂಗಾಳಿ ಈ ಪ್ರೀತಿ
ಇದು ಎಳೆ ಎಳೆಯಲ್ಲು ನೆಲೆಸಿರೊ ಹಸಿರು
ಎದೆ ಎದೆಯಲ್ಲು ಕಲೆತಿರೊ ಉಸಿರು
ಮನಗಳ ನಡುವಿನ ಸೆತುವೆ ಈ ಪ್ರೀತಿ
ಪ್ರೀತಿಯ ಭಾವಗಳೇನೆ
ಭೂಮಿಯ ಮೇಲಿನ ಬಣ್ಣಗಳು
ಪ್ರೀತಿನೆ ಇಲ್ಲದೆ ಹೋದರೆ ಬಣ್ಣಗಳೆಲ್ಲುಂಟು
ಪ್ರೀತಿಯ ರೂಪವೆ ತಾನೆ
ಎಲ್ಲೆಡೆ ಚೆಲ್ಲಿರೊ ಚೆಲುವುಗಳು
ಪ್ರೀತಿನೆ ಇಲ್ಲದೆ ಹೋದರೆ ಚೆಲುವಿನ್ನೆಲ್ಲುಂಟು
ಗಾಳಿ ಎಲ್ಲರುಸಿರಾಗಿ
ಈ ನಮ್ಮ ಭೂಮಿ ಮೇಲೆ ಬೀಸೊ ಕಾರಣ ಪ್ರೀತಿನೆ
ನೀರು ಜೀವ ಜಲವಾಗಿ
ಈ ಎಲ್ಲಾ ಜೀವ ಜಲ ಕಾಯೊ ಕಾರಣ ಪ್ರೀತಿನೆ
ಬಾಳೊಂದು ಹುಡುಗಾಟ ಅಂದಾಗ
ನಾವೆಲ್ಲ ನಿತ್ಯಾನು ಹುಡುಕೋದು ಪ್ರೀತಿನೆ
ಪ್ರತಿ ಹೃದಯದ ಹೊಲದಿ ಬೆಳೆಯುವ ಪೈರು
ಹರಿಯವ ತವಕದ ಜೋರು
ಅಡವಿಯ ನಡುವಿನ ಕಲರವ ಈ ಪ್ರೀತಿ
ಅ ಆರು ಋತುಗಳು ಪ್ರೀತಿಯ ಬೇರೆ ಬೇರೆ ಮಜಲುಗಳು
ಪ್ರೀತಿನೆ ಇಲ್ಲದೆ ಹೋದರೆ ಪ್ರಕೃತಿ ಇನ್ನೆಲ್ಲಿ
ಆ ಏಳು ಸ್ವರಗಳು ಪ್ರೀತಿಯ ಮಿಡಿತ ತುಡಿತ ತವಕಗಳು
ಪ್ರೀತಿನೆ ಇಲ್ಲದೆ ಹೋದರೆ ಸಂಗೀತ ಎಲ್ಲಿ
ಮೋಡ ಮೋಡವನು ಕೂಡಿ
ಮಳೆಯ ಸುರಿಸೊದು ಎಂದು ಕಂಡವರ್ಯಾರು ಭೂಮಿಲಿ
ಮನಸು ಮನಸುಗಳ ಸೇರಿ
ಒಲವ ಶುರುವಾಯ್ತುಎಂದು ಬಲ್ಲವರ್ಯಾರು ನಮ್ಮಲ್ಲಿ
ಎಷ್ಟೊಂದು ಕನಸುಗಳು ಪಲ್ಲವಿಸಿ ಖಾತರಿಸಿ
ಈ ಪ್ರೀತಿ ಜನಿಸುವುದು ಎದೆಯಲ್ಲಿ
ಸುಮ ಸುಮಗಳು ಸೂಸೊ
ಘಮ ಘಮ ಗಂಧ
ಕಂದನ ನಗುವಿನ ಕಿಲ ಕಿಲ ನಾದ
ನಮ್ಮಯ ಬದುಕಿನ ಅರ್ಥವೆ ಈ ಪ್ರೀತಿ
ಭೂಮಿನೆ ಭೇದಿಸಿಕೊಂಡು
ಕೋಮಲ ಮೋಳಕೆಯು ಹೊರಬರಲು
ಚೈತನ್ಯ ನೀಡುವಂತ ಮಾಯೆ ಈ ಪ್ರೀತಿನೆ
ಗೊತ್ತೇನೆ ಆಗದ ಹಾಗೆ
ಮೊಗ್ಗನ್ನು ಅರಳಿಸಿ ಹೂವು ಮಾಡೊ
ಯಾರಿಗು ಕಾಣಿಸದಂತ ಆ ಕೈ ಪ್ರೀತಿನೆ

0 Comments