ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ.... (Ommomme Nannannu Naanene) Kannadakkagi ondannu otthi


ಒಮ್ಮೊಮ್ಮೆ ನನ್ನನ್ನು 
ನಾನೇನೆ ಕೊಲೆಗೊಯ್ಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ.

ನನ್ನ ನೀನು ಎಂದೆಂದು ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ ನಿನ ಕೋಪವೇ ಕಿರುಕಾಣಿಕೆ

ಒಮ್ಮೊಮ್ಮೆ ನನ್ನನ್ನು
ನಾನೇನೆ ಕೊಲೆಗೊಯ್ಯುವೆ...

ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿಯೂರಲಿ

ತಿಳಿಸಿದರೂನು ಮುಗಿಯದ ಕಥೆಯ
ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ ಕಡು ವಿರಹವೆ ಕಿರುಕಾಣಿಕೆ.

ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
,
ನೆನಪಿನ ಕವಿತೆ ನೆನಪಲೆ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ ಸಿಗಲಾರದು ಸ್ವರಮಾಲಿಕೆ.

ಒಮ್ಮೊಮ್ಮೆ ನನ್ನನ್ನು
 ನಾನೇನೆ ಕೊಲೆಗಯ್ಯುವೆ



Post a Comment

0 Comments