ಎಲ್ಲಾ ಏಕೆ ಖಾಲಿ ಖಾಲಿ ನಿನ್ನಾ ನೊಡದೆ
ಎಲ್ಲಾ ಮೂಖ ಚುರು ನಿನ್ನ ಸದ್ದೇ ಕೇಳದೆ
ಏನೂ ಹೇಳದೆನೆ ಮಾಯವಾದೆ ಹೇಗೆ ನೀ
ಎಲ್ಲಾ ಗೋಡೆಯಿಂದ ಈಗ ನಂದೆ ಮಾರ್ದನಿ
ಬಿರುಗಾಳಿಗು ಮುಂಚೆ ಮೌನವೊಂದು ಕವಿದಂತೆ
ನಡು ಬೀದಿಯಲ್ಲೇನೆ ಯಾರೊ ಬಿಟ್ಟು ನಡೆದಂತೆ
ನಿಂತಲ್ಲೇ ಬೆಳಕೀಗ ಬದಲಾಗಿ ಹೋಯಿತೆ
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಕಿಟಕಿಯಲಿ ಹೂ ಬಿಸಿಲು ಬಂದಾಗ
ಮನಸಿನಲಿ ನೀ ನಗುತ ನಿಂತಂತೆ
ಕವಿದಿರಲು ಮೋಡಗಳು ಆಗಾಗ
ಸಿಡಿಲಿನಲು ನೀನಿರುವೆ ಮಿಂಚಂತೆ
ಯಾರ ಮುಂದೆ ತೋರಲಿ ನನಗಾಗುವ ವೇದನೆಯಾ
ಒಂಟಿಯಾದ ಭಾವನೆ ನಿನಗೂ ಸಹ ಆಗಿದೆಯಾ
ಕಾಣದಂತ ಒಂದು ಸೇತುವೇ ಕಟ್ಟಿ ನಾನು ನಿನ್ನಾ ಸೇರುವೇ
ಕನಸಿನ ಕಿನಾರೆ ಕೊಡುತಿದೆ ಈಶಾರೆ ಹೇಳದೆ ಏನನೂ
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಪುಟಗಳಲಿ ನವಿಲುಗರಿ ಸಿಗುವಾಗ
ಕೂಗುವೆನು ಮೈ ಮರೆತು ನಿನ್ನನ್ನು
ಚಂದಿರನ ಚೂರೊಂದು ನಗುವಾಗ
ಎಳೆಯುವೆನು ನೆನಪಿನ ತೇರನ್ನು
ನೋಡಬೇಕು ನಿನ್ನನ್ನೆ ನೆನಪಾದರೆ ತಕ್ಷಣವೇ
ಹೇಳಲಾಗದೀ ಪಾಡು ಅನುರಾಗದ ಲಕ್ಷಣವೇ
ಜೀವಕೀಗ ಒಂದೇ ಹಂಬಲಾ ಪ್ರೀತಿಯನ್ನೆ ನಾನು ನಂಬಲಾ
ಹೃದಯದ ವಿಷಾದ ಮರೆಸುವ ನಿನಾದ ಕೇಳಲು ಕಾದೆನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು

0 Comments