ಕಣ್ಣಲೇ ಇದೆ ಎಲ್ಲ ಕಾಗದ..... (Sariyaagi Nenapide Nanage) Mungaru Male 2


ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ 
ಮನದ ಪ್ರತಿ ಗಲ್ಲಿಯೊಳಗು ನಿನದೇ ಮೆರವಣಿಗೆ
ಕನಸಿನ ಕುಲುಮೆಗೇ ಉಸಿರನೂ ಊದುತಾ
ಕಿಡಿ ಹಾರುವುದು ಇನ್ನು ಖಚಿತ 

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ 

ಕಣ್ಣಲೇ ಇದೆ ಎಲ್ಲ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ 
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ 

ತೆರೆದೂ ನೀನು ಮುದ್ದಾದ ಅಧ್ಯಾಯ
ಸಿಗದೇ ಇದ್ರೆ ತುಂಬಾನೇ ಅನ್ಯಾಯ 
ನನ್ನಯಾ ನಡೆ ನುಡೀ ನಿನ್ನನೇ ಬಯಸುತಾ
ಬದಲಾಗುವುದು ಇನ್ನು ಖಚಿತ 

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ 

ನಿನ್ನ ನೃತ್ಯಕೇ ಸಿದ್ಧವಾಗಿದೆ
ಅಂತರಂಗದ ರಂಗ ಸಜ್ಜಿಕೆ 
ನಿನ್ನ ನೋಡದ ನನ್ನ ಜೀವನಾ
ಸುದ್ದಿ ಇಲ್ಲದಾ ಸುದ್ದಿಪತ್ರಿಕೇ 

ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕ್ಕೀಗ ನಿಂದೇನೆ ಕಾನೂನು 
ಕೊರೆಯುವಾ ನೆನಪಲೀ ಇರುಳನೂ ಕಳೆಯುತಾ
ಬೆಳಗಾಗುವುದೂ ಇನ್ನು ಖಚಿತ 

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ 

Post a Comment

0 Comments