ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ
ನೀನಿರದೆ ನಾನಿರೆನು
ಓ.. ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು
ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ
ನಿನ್ನಿಂದಲೇ ಸದಾ
ಬೆಳಗುವುದು ಈ ಮನ.
ನೀ ಜೀವನ
ಕನಸಾದೆ ನೀನು ನನಸಾದೆ ನೀನು
ಮನಸಾರೆ ನಾನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು
ನೀ ಹೋದೆ ಯಾವ ಕಡೆಗೆ
ಹೇಗಿರಲಿ ನಿನ್ನ ಹೊರತು
ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ
ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ
ಒಗಟಾಗಿದೆ.. ಈ ಜೀವನ
ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ..
ನೀನಿರದೆ ನಾನಿರೆನು
ಓ... ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು..
ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ
ಬೆಳಗುವುದು ಈ ಮನ..
ನೀ ಜೀವನ..

0 Comments