ಗಾಳಿಯೇ ನೋಡು ಬಾ ದೀಪದ ನರ್ತನ,
ರಾತ್ರಿಯೆ ನೀಡು ಬಾ ಮಾಯದ ದರ್ಪಣ..
ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ,
ನಿನ್ನಿಂದ ಈ ಪಾಡು ಇನ್ನೂನು ಚೆನ್ನ
ಅದೇ ಪ್ರೀತಿಯ ಲಕ್ಷಣ...
ಗಾಳಿಯೇ ನೋಡು ಬಾ...!!
ದೀಪದ ನರ್ತನಾ..
ಸಂಚಾರಿ ಮನ ಸೆರೆಯಾದ ಕ್ಷಣ
ಎದೆ ಗೂಡಲ್ಲಿ ಚಂದ್ರೋದಯ..
ಸಿಹಿಯಾದ ಅಲೆ ಶುರುವಾದಾಗಲೆ
ನಿಜ ಸಂಗಾತಿ ನೀನದೆಯ ..
ಕನಸು ಕಲ್ಜಾರಿದೆ,
ಮನಸು ಬೆರೆಸೋಣ..
ಅದೇ ಪ್ರೀತಿಯ ಲಕ್ಷಣ..
ಗಾಳಿಯೇ ನೋಡು ಬಾ...
ದೀಪದ ನರ್ತನಾ..
ಹೆಸರನ್ನೂ ಸಹಾ ಮರೆವಂತಾ ಭಯ
ಇದು ಏನಿಂತ ಆಕರ್ಷಣೆ,
ಮರುಳಾದಾಗಲೆ ಮರು ಜನ್ಮವಿದೆ
ಬಿಗಿ ಮೌನಾನೆ ಸಂಭಾಷಣೆ..
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ..
ಅದೇ ಪ್ರೀತಿಯ ಲಕ್ಷಣ..
ಗಾಳಿಯೇ ನೋಡು ಬಾ..
ದೀಪದ ನರ್ತನಾ..

0 Comments