ಗಮನವಾ ಸೆಳೆಯುವ..... (Gamanava Seleyuva Geleyane) Chingaari


ಗಮನವಾ ಸೆಳೆಯುವ
ಗೆಳೆಯನೆ ನಿನ್ನ ಮಾತೇ ಬೇರೆ
ಕನಸಿಗೆ ಕರೆಯುವ
ಚೆಲುವನೆ ನಿನ್ನ ರೀತಿ ಬೇರೆ
ಅಚ್ಚರಿ ಏನಿದೆ ಅಕ್ಕರೆಯಾದರೆ

ಕೌತುಕ ನೀನು ತೋರಿ
ಮೋಹಕ ನನ್ನ ದಾರಿ
ಯಾತಕೆ ಯಾರ ಊಸಾಬರಿ

ನೀ ನಿಂತೆ ನೀಡುತ ಕಣ್ಣಲಿ ಉತ್ತರ
ನಾನಾದೆ ಹಾಡುತ ಇನ್ನು ಸ್ವಲ್ಪ ಹತ್ತಿರ
ಉಸಿರಿನ ಬಿಸಿಯಲಿ ಕರಗಿತು ಎಲ್ಲಾ ದೂರ

ಈ ಕಣ್ಣ ಮಿಂಚಲಿ ಸಮಾಚಾರ ನಿನ್ನದೆ
ನಿನ್ನಲ್ಲು ನನ್ನಲ್ಲು ಇರೊ ಜೀವ ಒಂದೇನೆ
ಮುನಿಯುವ ಮುನ್ನವೆ ಮೋಹಿಸು ನೀನೆ

ಗಮನವಾ ಸೆಳೆಯುವ
ಗೆಳೆಯನೆ ನಿನ್ನ ಮಾತೇ ಬೇರೆ
ಕನಸಿಗೆ ಕರೆಯುವ
ಚೆಲುವನೆ ನಿನ್ನ ರೀತಿ ಬೇರೆ
ಅಚ್ಚರಿ ಏನಿದೆ ಅಕ್ಕರೆಯಾದರೆ

ನಿಂತಲ್ಲೆ ನಿಲ್ಲುತ ನನ್ನ ಪ್ರಾಣ ಹೋಗಿದೆ
ತಂತಾನೆ ಈ ಮೌನ ಭಾವ ಪೂರ್ಣವಾಗಿದೆ
ಕನಸಿನ ಪರಿವಿಡಿ ಪುಟವಿದೆ ಕಣ್ಣ ಮುಂದೆ

ಈ ಜಾಗ ಈ ವೇಳೆ ಸಿಗೊದುಂಟೆ ಆ ಮೇಲೆ
ಬೇಕಿಗ ವಾಪಸ್ಸು ಪಿಸು ಮುತ್ತಿನ ಮಾಲೆ
ಬರೆಯುವೆ ಮುನ್ನವೆ ಓದು ನೀ ಓಲೆ

ಹೋ.. ಗಮನವಾ ಸೆಳೆಯುವ
ಗೆಳೆಯನೆ ನಿನ್ನ ಮಾತೇ ಬೇರೆ
ಕನಸಿಗೆ ಕರೆಯುವ
ಚೆಲುವನೆ ನಿನ್ನ ರೀತಿ ಬೇರೆ
ಅಚ್ಚರಿ ಏನಿದೆ ಅಕ್ಕರೆಯಾದರೆ

Post a Comment

0 Comments