ನಾ ಕಾಯುತಿರುವೆ ಎಲ್ಲ ಮರೆತು..... (Naa Kaayuthiruve Yella Marethu) Kariya 2


ನಾ ಕಾಯುತಿರುವೆ ಎಲ್ಲ ಮರೆತು
 ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ
 ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ

ನಾ ಕಾಯುತಿರುವೆ ಎಲ್ಲ ಮರೆತು 
ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ 
ನಿನ್ನ ಕಡೆಗೆ.

ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
ಬೇಕು ಒಂದು ಜೀವ ಮಾತಿಗೆ

ನಾ ಕಾಯುತಿರುವೆ ಎಲ್ಲ ಮರೆತು
 ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ 
ನಿನ್ನ ಕಡೆಗೆ.

ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
ಅನುರಾಗದಲ್ಲಿ ಹೊಳೆವ ಅವತಾರ ನೂತನ
ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
ಕಣ್ಣ ಹನಿಯು ಮಾತ್ರ ನನ್ನದು

ನಾ ಕಾಯುತಿರುವೆ ಎಲ್ಲ ಮರೆತು 
ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ 
ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ

ನಾ ಕಾಯುತಿರುವೆ ಎಲ್ಲ ಮರೆತು 
ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ 
ನಿನ್ನ ಕಡೆಗೆ.

Post a Comment

0 Comments