ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ
ನರ ಮನ್ಸ ನರ ಮನ್ಸ ನಿಂದೇನು ನಡೆಯೋಲ್ಲ
ಅವನಿಷ್ಟದಂಗೆ ಎಲ್ಲಾ
ಬರೀ ಗೈಲೇ ಬರೋದು ಬರೀ ಗೈಲೇ ಹೋಗೋದು
ತಿಳಿದಾಗ ನೀನೇ ಬುದ್ಧನೂ
ಕಳಬೇಡ ಕೋಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೇ ಮೆರಿಬೇಡವೋ ಓ ಓ ಓ ಓ
ನರಮೇಧವ ಶುರು ಮಾಡಿದ ನರ ರಾಕ್ಷಸ ಯಾರೊ
ಅಭಿಮಾನದ ಒಳ ಸಂಚನು ನಡೆಸೋನು ಯಾರೋ ಓ ಓ ಓ
ಪಾಪಿಗಳ ಸಂತೇಯಲ್ಲೀ ಪ್ರಾಣಕೆ ಬೆಲೆಯೇ ಇಲ್ಲ
ನಿನ್ನೋರು ಅನ್ನೋರೇ ಇಲ್ಲಾ ಆ ಆ ಆ
ನರ ಮನ್ಸ ನರ ಮನ್ಸ ಪ್ರೀತಿನೇ ಉಸಿರಾಟ
ತಿಳಿದೋನಿಗೇನೇ ಬಾಳೂ... ಊ ಊ
ನರ ಮನ್ಸ ನರ ಮನ್ಸ ಪ್ರೀತಿನ ಮರೀಬೇಡ
ಮರೆತೋನಿಗೆಲ್ಲಾ... ಶೂನ್ಯ
ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೇ ಮೋಹ
ನಿನ್ನ ನಾಳೆಯು ಹಣೆಯಲ್ಲಿದೆ ಅರಿವಾದರೇ ಸ್ನೇಹಾ.ಆ ಆ ಆ
ಆಸೇ ಗೆ ಬದುಕೋರೆಲ್ಲಾ ಮಣ್ಣಾಗಿ ಹೋಗೋರೆ
ನಿಂದೂನು ಅಷ್ಟೇ ತಾನೇ... ಏ ಏ ಏ
ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ
ನರ ಮನ್ಸ ನರ ಮನ್ಸ ನಿಂದೇನು ನಡೆಯೋಲ್ಲ
ಅವನಿಷ್ಟದಂಗೆ ಎಲ್ಲಾ
ಬರೀ ಗೈಲೇ ಬರೋದು ಬರೀ ಗೈಲೇ ಹೋಗೋದು
ತಿಳಿದಾಗ ನೀನೇ ಬುದ್ಧನೂ
ಕಳಬೇಡ ಕೋಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೇ ಮೆರಿಬೇಡವೋ ಓ ಓ ಓ ಓ

0 Comments