ಈ ಲೋಕ ನನ್ನ ಕೇಳಲಿಲ್ಲ
ನಾನಂತು ಯಾಕೊ ಕಾಣೆ ಹೇಳಲಿಲ್ಲ
ಯಾಕೊ ಕಾಣೆ ಹೇಳಲಿಲ್ಲ
ನನಗೂನು ಲೋಕ ನನ್ನ ಕೇಳಲಿಲ್ಲ
ಹೇಳದ ಮಾತು ನೂರಾರಿದೆ
ಹೇಲದೆ ನಾವು ದೂರಾದೆವೆ
ಆರದೆ ಗಾಯ ಹಸಿಯಾಗಿದೆ
ಪ್ರೀತಿಯ ಕನಸೇ ಹುಸಿಯಾಗಿದೆ
ಯಾರಿಗೆ ಯಾರು ಅಂತ ಮೇಲಿರೊ ಭಗವಂತ
ಮೊದಲೇನೆ ಗೀಚಿ ಬಿಡುವಾ
ನೆನಪೊಂದೆ ಉಳಿದು ಹೋಯ್ತು ಕಣ್ಣಿರ ಸ್ನೇಹ ಆಯ್ತು
ಸಂತೈಸಬೇಕು ಮನವಾ
ಓ....... ಜೊತೆಯಾಗಿ ನಾವು ನಡೆದಂತ ದಾರಿಗೆ
ಕೊನೆಯೊಂದು ಬಂತೆ ಹೇಳೊದು ಯಾರಿಗೆ
ಸಿಹಿ ಹಾಲಿನಂತ ಖುಷಿಯಾದ ಪ್ರೀತಿಗೆ
ಹುಳಿ ಹಿಂಡಿದಂತೆ ನಮ್ಮ ಪಾಲಿಗೆ
ಹಣೆ ಮೇಲಿರೊ ಗೆರೆ ಮಾಸಿತೆ
ಹೊಸ ಬಾಳಿಗು ಕನಸಾಯಿತೆ
ಕತೆಗಾರನು ಖುಷಿಯಾಗಲು ನನ್ನ ಪಾತ್ರವೆ ಬಲಿಯಾಯಿತೆ
ಮದರಂಗಿ ಕೈ ತುಂಬಿ ಕೆಂಪು ಕೆಂಪು ಸಂಭ್ರಮ ಎಂದಿಗೂ
ನನ್ನ ಕಣ್ಣ ನೀರೆಲ್ಲ ಕೆಂಪು ಕೆಂಪು ಕಾಣದು ಯಾರಿಗೂ
ಯಾರಿಗೆ ಯಾರು ಅಂತ ಮೇಲಿರೊ ಭಗವಂತ
ಮೊದಲೇನೆ ಗೀಚಿ ಬಿಡುವಾ
ನೆನಪೊಂದೆ ಉಳಿದು ಹೋಯ್ತು ಕಣ್ಣಿರ ಸ್ನೇಹ ಆಯ್ತು
ಸಂತೈಸಬೇಕು ಮನವಾ
ಓ.... ಶುಭವಾಗಲಿ ಗೆಳತಿ ಶುಭವನ್ನೇ ಕೋರುವೆ
ಸುಖವಾಗಿ ಬಾಳು ನಾಳೆ ಎನ್ನುವೇ
ಹೇಗೆ ಇರು ನೀನು ನಿನಗಾಗಿ ಕಾಯುವೆ
ಕೊನೆವರೆಗು ನಿನ್ನ ಪ್ರೀತಿ ಮಾಡುವೆ
ಬದಲಾದರು ಋತುಮಾನವು ಬದಲಾಗದು ನನ್ನ ಪ್ರೇಮವು
ಅಳಬಾರದು ನೆನಪಾದರು ಬರಬಾರದು ನೆಪಕಾದರು
ಓ ನಲ್ಲೆ ನೀ ಇಟ್ಟ ಏಳು ಹೆಜ್ಜೆ ಏಳಿಗೆ ಆಗಲಿ
ನೀ ಹೋಗಿ ಬಾರಮ್ಮ ಮೂರು ಕೋಟಿ ದೇವರು ಕಾಯಲಿ
ಯಾರಿಗೆ ಯಾರು ಅಂತ ಮೇಲಿರೊ ಭಗವಂತ
ಮೊದಲೇನೆ ಗೀಚಿ ಬಿಡುವಾ
ನೆನಪೊಂದೆ ಉಳಿದು ಹೋಯ್ತು ಕಣ್ಣಿರ ಸ್ನೇಹ ಆಯ್ತು
ಸಂತೈಸಬೇಕು ಮನವಾ

0 Comments