ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ.....(Mungaru Maleye Yenu Ninna Hanigala Lile) Mungaru Male


ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..
ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
 
ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎದೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು...ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ
ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ
ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ
ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು
ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

Post a Comment

0 Comments