ಈ ಉಸಿರಿಗೆ.. ಗಾಳಿಯೆ ನೀನಾಗಿರು... ( Ee Usirige Galiye Neenagiru) Chakravarthi



ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ
ನೀನಾಗಿರು…..

ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ
ನೀನಾಗಿರು

ಬೇಕೀಗ ಬೇರೆ ಏನೋ ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತ
ಮತ್ತೇ ಮಳೆಯಾಗಿದೆ…
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ…
ಮತ್ತೇ ಮಳೆಯಾಗಿದೆ..


ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ 
ನೀನಾಗಿರು..

ದಡ ನೀನಾಗು ಸದಾಕಾಲ
ಅಲೆಯಂತಾಗಿ ನಾ ಸೋಕುವೆ
ಬಾಲೆ ನೀನಾಗು ಅಪಾಯನೆ ಇರದಂತೆ ನಾ ಬಾಳುವೆ
ನಿನದೆ ತಗೋ ಜೀವವೆ ನೀ ಬೇಕಾದರೆ
ಎದುರೆ ಇರು ಎಂದಿಗೂ ಅದೇ ಆಸರೆ..

ಬೇಕೀಗ ಬೇರೆ ಏನೋ ಈ ಜೀವಕೆ
ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..

ಈ ಉಸಿರಿಗೆ ಗಾಳಿಯೆ ನೀನಾಗಿರು….

ನಿನ್ನ ಈ ಕಣ್ಣ ಬೆಳಕಲ್ಲಿ
ದಿನ ನಿತ್ಯನು ದೀಪಾವಳಿ
ಹೋಒ.. ಇನ್ನು ಈ ತೋಳ ಸೆರೆಯಲ್ಲಿ
ಬದುಕೆಲ್ಲಾ ತಾರಾವಳಿ
ನಿನ್ನೆ ಕೂಗಿ ಕರೆವಾಸೆಯು
ಬಿಡುವಿಲ್ಲದೆ
ಜೊತೆ ಸೇರಿ ನಡೆವಾಸೆಯು ದೂರಾಗದೇ…

ಬೇಕೀಗ ಬೇರೆ ಏನೋ ಈ ಜೀವಕೆ..
ನೀ ಸಿಕ್ಕ ಮೇಲೆ ಎಲ್ಲ
ಸಂಪೂರ್ಣವಾಗುತ
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ…

Post a Comment

0 Comments