ಈ ತನುವು ನಿನ್ನಾ ಗುಡಿ ಪರಶಿವನೆ.... (E Thanuvu Ninna Gudi ) Bhakthi Album Song


ಈ ತನುವು ನಿನ್ನಾ ಗುಡಿ ಪರಶಿವನೆ
ಈ ಮನವು ನಿನ್ನಾ ನೆಲೆ...
ಈ ತನುವು ನಿನ್ನಾ ಗುಡಿ ಪರಶಿವನೆ
ಈ ಮನವು ನಿನ್ನಾ ನೆಲೆ...
ನನ್ನುಸಿರ ಕಣಕಣಗಳು ಶಿವ ನಿನ್ನ
ನಾಮವನೆ ಕನವರಿಸಿದೆ

ಜಯ ಜಯತು ಜಗಧೀಶ್ವರಾ ಪಾಹಿಮಾಂ
ಜಯ ಜಯತು ಗಂಗಾಧರಾ
ಜಯ ಜಯತು ಜಗಧೀಶ್ವರಾ ಪಾಹಿಮಾಂ
ಜಯ ಜಯತು ಗಂಗಾಧರಾ

ಈ ತನುವು ನಿನ್ನಾ ಗುಡಿ ಪರಶಿವನೆ
ಈ ಮನವು ನಿನ್ನಾ ನೆಲೆ...
ನನ್ನುಸಿರ ಕಣಕಣಗಳು ಶಿವ ನಿನ್ನ
ನಾಮವನೆ ಕನವರಿಸಿದೆ

ಈ ತನುವು ನಿನ್ನಾ ಗುಡಿ.......

ನೀ ಸೂತ್ರಧಾರಿ ನಾ ಪಾತ್ರಧಾರಿ
ನಿನ್ನಿಚ್ಚೆ ನಾನರಿಯೆನು
ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು
ನಿನ್ನನ್ನೆ ನಂಬಿರುವೆನೂ

ಹೆತ್ತವಳ ಮನಸು ಕಲ್ಲಾಗಿ ಹೋಯ್ತೆ
ಶಂಕರಿಯೆ ಹೇಳು ಇದು ನ್ಯಾಯವೇ
ಸಿರಿತನವು ಬೇಡ ದೊರೆತನವು ಬೇಡ
ಸದ್ಗತಿಯು ನನಗಾಗಲಿ
ನನ್ನಾತ್ಮ ಶಿವಲೀಲೆಯನು ಹಾಡಲಿ

ಜಯ ಜಯತು ಜಗಧೀಶ್ವರಾ ಪಾಹಿಮಾಂ
ಜಯ ಜಯತು ಗಂಗಾಧರಾ

ಶಿವನಿತ್ತ ಜೀವ ಶಿವಗೆ ಅರ್ಪಿಸಿದ
ಧನ್ಯತೆಯು ನನಗಾಗಲೀ
ನನ್ನ ತನು ಮನವು ರೋಮ ರೋಮಗಳು
ಲಿಂಗರೂಪನನ ನೆನೆಯಲೀ
ಮಂಗಳೆಯೆ ನಿನ್ನ ಮುನಿಸು ಕರಗಿರಲಿ
ಸತ್ಯಕ್ಕೆ ನ್ಯಾಯಕ್ಕೆ ಜಯ ದೊರಕಲೀ

ಶರಣರಿಗೆ ವಿಜಯ ಬಕುತರಿಗೆ ಅಭಯ
ಇದು ತಾನೆ ನಿಜ ನೀತಿಯೂ
ಭಕ್ತಿಯು ಪರಶಿವಗೆ ಬಲು ಪ್ರೀತಿಯು

ಜಯ ಜಯತು ಜಗಧೀಶ್ವರಾ ಪಾಹಿಮಾಂ
ಜಯ ಜಯತು ಗಂಗಾಧರಾ

ಈ ತನುವು ನಿನ್ನಾ ಗುಡಿ ಪರಶಿವನೆ
ಈ ಮನವು ನಿನ್ನಾ ನೆಲೆ...
ನನ್ನುಸಿರ ಕಣಕಣಗಳು ಶಿವ ನಿನ್ನ
ನಾಮವನೆ ಕನವರಿಸಿದೆ

ಸತ್ಯಂ ಶಿವಂ ಸುಂದರಂ ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ ಸತ್ಯಂ ಶಿವಂ ಸುಂದರಂ

Post a Comment

0 Comments