ಮೆಲ್ಲನೆ ಹೊಂಗನಸೊಂದು ಈ ಹೃದಯ ಹೊಕ್ಕಂತೆ
ನೀ ನೆನಪಿಗೆ ಬಂದಾಗ.........
ಮೆಲ್ಲನೆ ಹೊಂಗನಸೊಂದು ಈ ಹೃದಯ ಹೊಕ್ಕಂತೆ
ನೀ ನೆನಪಿಗೆ ಬಂದಾಗ
ಸುಮ್ಮನೆ ಹೊಂಗನಸೊಂದು ಈ ಎದೆಗೆ ಜಿಗಿದಂತೆ
ನೀ ನಗುತಲಿ ನಿಂತಾಗ
ತಣಿಸುವೆ ಈ ಮನಸನ್ನು ಸೋನೆ ಮಳೆಯಂತೆ
ಅದು ಎಲ್ಲೊ ಇದ್ದರು ನೀನು
ಸನಿಹ ಕೂರುವೆ ಮಾಯೆಯಂತೆ ಮೋಡಿಯಂತೆ
ಒಲವಿನಾ ಹುಡುಗ ಎದುರು ಬಾ ಬೇಗ
ಒಲವಿನಾ ಹುಡುಗ ಎದುರು ಬಾ ಬೇಗ
ನೀನಿರದ ಆ ಸ್ವರ್ಗಕಿಂತಲು
ನರಕವೆ ಬಲು ವಾಸಿ
ಮನೆ ಇದ್ದರು ಮಠ ಇದ್ದರು
ಪ್ರೇಮಿಗಳು ಪರದೇಶಿ
ಮಳೆ ಇರಲಿ ಆ ಬಿಸಿಲಿರಲಿ
ಒಲವಿದು ಜೊತೆಗಿರಲಿ
ಜನ ಮರುಳು ಜಗ ಮರುಳು
ಈ ಪ್ರೀತಿಗೆ ಏನೆನ್ನಲಿ
ಅಯ್ಯೊ ಇದು ಕಸ್ತೂರಿ
ಕೋತಿಗೆನು ಗೊತ್ತು ರೀ
ನಂಗೆ ಏನು ಕರ್ಮಾ ರೀ
ಸಿಕ್ಕಿ ಬಿದ್ದೆ ಯಾಮಾರಿ
ಪ್ರೀತಿಯಲ್ಲಿ ಬಿದ್ದ ಮೇಲೆ ಬುದ್ದಿ ಮಾತು
ಕೇಳೊದಿಲ್ಲ ಹೋಓಹೋ
ಒಲವಿನಾ ಹುಡುಗ ಎದುರು ಬಾ ಬೇಗ
ಒಲವಿನಾ ಹುಡುಗ ಎದುರು ಬಾ ಬೇಗ
ಮೆಲ್ಲನೆ ಹೊಂಗನಸೊಂದು ಈ ಹೃದಯ ಹೊಕ್ಕಂತೆ
ನೀ ನೆನಪಿಗೆ ಬಂದಾಗ.........
ಸುಮಧುರವು ಹಿತಕರವು
ಪ್ರೀತಿಯಲ್ಲಿ ಪ್ರತಿ ರಾಗ
ಕಿರಿಕಿರಿಯೊ ಹರಿಕತೆಯೊ
ಪ್ರೇಮಿಗಳ ಪರಸಂಗ
ನೋವಿನಲು ಬರಿ ಸುಖವೆ
ಪ್ರೀತಿ ಬಂದು ಶುಭಯೋಗ
ಬರಿ ರಗಳೆ ಬರಿ ಬೊಗಳೆ
ಪ್ರೀತಿ ಅನ್ನೊದೊಂದು ರೋಗ
ಬೇಕೆ ಬೇಕು ಸಂಗಾತಿ
ಪ್ರೀತಿ ಅಂದ್ರೆ ಓಂ ಶಾಂತಿ
ಹುಚ್ಚು ಕಣೆ ಈ ಪ್ರೀತಿ
ಕಾಣೆ ನಾನು ಏನೈತಿ
ಕೋಣನ್ ಮುಂದೆ ಕಿನ್ನರಿ ಬಾರ್ಸಿ
ಲಾಭ ಇಲ್ಲ ಈಗ ಹೋಓಹೋ
ಒಲವಿನಾ ಹುಡುಗ ಒಲಿದು ಎದುರು ಬಾ ಬೇಗ
ಒಲವಿನಾ ಹುಡುಗ ಒಲಿದು ಎದುರು ಬಾ ಬೇಗ
ಮೆಲ್ಲನೆ ಹೊಂಗನಸೊಂದು ಈ ಹೃದಯ ಹೊಕ್ಕಂತೆ
ನೀ ನೆನಪಿಗೆ ಬಂದಾಗ
ಸುಮ್ಮನೆ ಹೊಂಗನಸೊಂದು ಈ ಎದೆಗೆ ಜಿಗಿದಂತೆ
ನೀ ನಗುತಲಿ ನಿಂತಾಗ
ತಣಿಸುವೆ ಈ ಮನಸನ್ನು ಸೋನೆ ಮಳೆಯಂತೆ
ಅದು ಎಲ್ಲೊ ಇದ್ದರು ನೀನು
ಸನಿಹ ಕೂರುವೆ ಮಾಯೆಯಂತೆ ಮೋಡಿಯಂತೆ
ಒಲವಿನಾ ಹುಡುಗ ಎದುರು ಬಾ ಬೇಗ
ಒಲವಿನಾ ಹುಡುಗ ಎದುರು ಬಾ ಬೇಗ

0 Comments